ಹುಬ್ಬಳ್ಳಿ: ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಕಿರಾಣಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಆಕಳವಾಡಿ ಬುಕ್ ಸ್ಟಾಲ್ ಹತ್ತಿರದ ಅಂಗಡಿಯಲ್ಲಿ ನಡೆದಿದೆ.ಹೌದು ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದಿದ್ದು, ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯವನ್ನು ಸೆರೆ ಹಿಡಿದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ನೀಡಿದ್ದಾರೆ.
ಇನ್ನೂ ಕಿರಾಣಿ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ದಿನಸಿ ಉತ್ಪನ್ನಗಳು ಸುಟ್ಟು ಕರಕಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿರುವ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿದೆ.
Kshetra Samachara
18/07/2022 09:52 pm