ಹುಬ್ಬಳ್ಳಿ: ನಗರದ ಹುಬ್ಬಳ್ಳಿ ಕಾರವಾರ ರಸ್ತೆಯ ಸೆವೆನ್ ಸ್ಟಾರ್ ಫ್ಯಾಕ್ಟರಿ ಬಳಿ ಏಪ್ರಿಲ್ 27 ರಂದು ಬೆಳಗ್ಗೆ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಲಾರಿ ಚಾಲಕ, ನಗರದ ನೂರಾಣಿ ಪ್ಲಾಟ್ ನಿವಾಸಿ ದಾವಲಸಾಬ ಬಾಬುಸಾಬ ಕುರಹಟ್ಟಿ ( 55 ) ಮೃತಪಟ್ಟವರು. ಇವರು ತಮ್ಮ ಮಗನನ್ನು ಬೈಕ್ನಲ್ಲಿ ಹಿಂದೆ ಕುಳಿಸಿಕೊಂಡು ನಗರದಿಂದ ಅಂಚಟಗೇರಿ ಕಡೆಗೆ ಹೋಗುತ್ತಿದ್ದ ವೇಳೆ ವಾಹನ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆಂದು ಪೊಲೀಸ್ ಮೂಲಗಳು ತಿಳಿದಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/05/2022 05:08 pm