ಹುಬ್ಬಳ್ಳಿ: ವಿದ್ಯುತ್ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ನಡೆದಿದೆ.
ಶಿಗ್ಗಾಂವ ಮೂಲದ ವ್ಯಕ್ತಿ ಮೃತಪಟ್ಟವನಾಗಿದ್ದು, ಗೌಂಡಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತ ಕೆಲಸಕ್ಕೆಂದು ದಿನನಿತ್ಯದಂತೆ ಬಂದ ವೇಳೆಯಲ್ಲಿ ಇನಾಂ ವೀರಾಪುರದಲ್ಲಿ ಮನೆ ಕೆಲಸ ಮಾಡುತ್ತಿರುವ ವೇಳೆ ಅಚಾನಕ್ ಆಗಿ ವಿದ್ಯುತ್ ಸ್ಪರ್ಶಗೊಂಡಿದೆ.
ಕೂಡಲೇ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/03/2022 01:43 pm