ಬೈಕ್ ನಲ್ಲಿ ತೆರಳುವ ವೇಳೆ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳದಲ್ಲೇ ಮೃತ ಪಟ್ಟ ಘಟನೆ ನವಲಗುಂದ ಪಟ್ಟಣದ ಕೆಸಿಸಿ ಬ್ಯಾಂಕ್ ಎದುರು ಸಂಭವಿಸಿದೆ. ಹೌದು ಸುಮಾರು 62 ವರ್ಷ ವಯಸ್ಸಿನ ಈರನಗೌಡ ಅಜ್ಜನಗೌಡ ಹೊಸೂರು ಎಂಬ ತಾಲ್ಲೂಕಿನ ಗುಮ್ಮಗೋಳ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಕುಟುಂಬಕ್ಕೆ ಮೃತ ದೇಹವನ್ನು ಹಸ್ತಾಂತರಿಸಿದರು.
ಇದೆ ವೇಳೆ ಅದೇ ರಸ್ತೆಯಿಂದ ತೆರಳುತ್ತಿದ್ದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಮೃತರ ಕುಟುಂಬಕ್ಕೆ ಸುದ್ದಿ ತಿಳಿಸಿ, ದೇಹವನ್ನು ಹಸ್ತಾಂತರಿಸುವವರೆಗೂ ಸ್ಥಳದಲ್ಲೇ ಇದ್ದರು.
Kshetra Samachara
15/03/2022 06:07 pm