ಹುಬ್ಬಳ್ಳಿ: ಕಟ್ಟಡ ಗೋಡೆಗೆ ಬಣ್ಣ ಹಚ್ಚುವ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ, ಕೆಳಗೆ ಬಿದ್ದು ಕಟ್ಟಡ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ನಗರದ ಹಳೇ ಹುಬ್ಬಳ್ಳಿ ನೇಕಾರನಗರ ಮಾವನೂರ-ಕಟ್ನೂರ ರಸ್ತೆಯಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡಕ್ಕೆ ಕಾರ್ಮಿಕನೊಬ್ಬ ಗೋಡೆಗೆ ಬಣ್ಣ ಹಚ್ಚುವ ವೇಳೇ ವಿದ್ಯುತ್ ತಂತಿಗೆ ಪೇಂಟಿಂಗ್ ರೂಲರ್ ತಗುಲಿದ್ದರಿಂದ, ವಿದ್ಯುತ್ ಪ್ರವಹಿಸಿ ತೀವ್ರ ಸುಟ್ಟು ಗಾಯಗೊಂಡು ಮೇಲಿಂದ ಕೆಳಗೆ ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃಪಟ್ಟಿದ್ದಾರೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/02/2022 09:58 am