ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಬ್ಬಿನ ಹೊಲದಲ್ಲಿ ಲಾರಿಗೆ ಬೆಂಕಿ: ಧಗಧಗನೆ ಹೊತ್ತಿ ಉರಿದ ಕಬ್ಬು ತುಂಬಿದ ಲಾರಿ

ಹುಬ್ಬಳ್ಳಿ: ಕಬ್ಬಿನ ಹೊಲದಲ್ಲಿ ಲಾರಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ‌ ಗ್ರಾಮದಲ್ಲಿ ನಡೆದಿದೆ.

ದ್ಯಾಮಣ್ಣ ಗುಡಿಗಾಳ ಎನ್ನುವವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿ ಸ್ಟಾರ್ಟ್ ಮಾಡುವಾಗ ಸ್ಪಾರ್ಕ್ ಆಗಿ ಬೆಂಕಿಯ ‌ಕಿಡಿ ಕೆಳಗೆ ಬಿದ್ದಿದೆ. ಪರಿಣಾಮ ಕಬ್ಬಿನ ಸ್ವಾಗಿಗೆ (ಒಣಗಿದ ಸೊಪ್ಪು) ಬೆಂಕಿ ತಗುಲಿ ಲಾರಿಗೂ ಹೊತ್ತಿಕೊಂಡಿದೆ. ಬೆಂಕಿಯು ಕ್ಷಣ ಮಾತ್ರದಲ್ಲಿ ಸಂಪೂರ್ಣ ಲಾರಿಗೆ ವ್ಯಾಪಿಸಿದ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಈ ಬೆಂಕಿ ಪಕ್ಕದ ಮೂರು ಎಕರೆ ಕಬ್ಬಿಗೂ ತಾಗಿ ಅಲ್ಲಿ ಕಬ್ಬು ಭಸ್ಮವಾಗಿದೆ. ಈ ಜಮೀನು ಗಂಗವ್ವ ಕೂಲಿ ಎನ್ನುವವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳಸ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Shivu K
Kshetra Samachara

Kshetra Samachara

31/01/2022 01:51 pm

Cinque Terre

26.98 K

Cinque Terre

0

ಸಂಬಂಧಿತ ಸುದ್ದಿ