ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗಾವಿ ಕಡೆಗೆ ಹೊರಟ್ಟಿದ್ದ ಸರಕು ಸಾಗಣೆ ರೈಲು ಹಳಿ ತಪ್ಪಿದ್ದು, 300 ಮೀಟರ್‌ವರೆಗಿನ ರೈಲು ಮಾರ್ಗ ಕಿತ್ತು ಹೋಗಿದೆ.
ರೈಲು ನಿಲ್ದಾಣದಲ್ಲಿ ಒಟ್ಟು ಆರು ಮಾರ್ಗಗಳಿವೆ. ಕೊನೆಯ ಮಾರ್ಗ ಗೂಡ್ಸ್ ರೈಲುಗಳ ಸಂಚಾರಕ್ಕೆ ಮೀಸಲಾಗಿದೆ. ಇಲ್ಲಿನ ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆ ಭಾರಿ ಸದ್ದು ಉಂಟಾಗಿ ಹಳಿಯ ಮಾರ್ಗದಲ್ಲಿ ದೂಳು ಎದ್ದಿತ್ತು. ಸಕಾಲದಲ್ಲಿ ರೈಲು ನಿಲುಗಡೆ ಮಾಡಿದ್ದರಿಂದ ಯಾವುದೇ ಅನಾಹುತ ಆಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ ಕಾರ್ಮಿಕರು ಸಂಜೆಯವರೆಗೂ ಕಿತ್ತು ಹೋದ ಮಾರ್ಗದ ದುರಸ್ತಿಯಲ್ಲಿ ತೊಡಗಿದ್ದರು. ಕ್ರೇನ್ ಬಳಸಿ ಹೊಸ ಸ್ಲೀಪರ್‌ಗಳನ್ನು ಅಳವಡಿಸಲಾಯಿತು. ನಿಲ್ದಾಣದ ಕೊನೆಯ ಮಾರ್ಗದಲ್ಲಿ ಅನಾಹುತ ಸಂಭವಿಸಿದ್ದರಿಂದ ಪ್ರಯಾಣಿಕರ ರೈಲುಗಳು ಓಡಾಟಕ್ಕೆ ಯಾವುದೇ ತೊಂದರೆ ಆಗಲಿಲ್ಲ.
Kshetra Samachara
08/01/2022 10:04 pm