ಧಾರವಾಡ: ಕ್ರೂಸರ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾದ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಬಳಿಯ ನರೇಂದ್ರ ಕ್ರಾಸ್ ಬಳಿ ನಡೆದಿದೆ. ಬೈಕ್ ಮೇಲೆ ಬರುತ್ತಿದ್ದ ಕವಲಗೇರಿ ಗ್ರಾಮದ ಇಬ್ಬರು ಯುವಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ನರೇಂದ್ರ ಕ್ರಾಸ್ ಬಳಿ ಈ ಘಟನೆ ನಡೆಸಿದ್ದು, ಘಟನೆಯಲ್ಲಿ ಓರ್ವ ಯುವಕನ ಕಾಲು ಮುರಿದಿದೆ. ಮತ್ತೋರ್ವನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಿಂದ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಿತ್ತು.
Kshetra Samachara
23/10/2021 01:09 pm