ಕುಂದಗೋಳ : ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬ ದುರ್ಮರಣಕ್ಕೆ ಈಡಾದ ಘಟನೆ ಕುಂದಗೋಳ ಪಟ್ಟಣದ ಹೊರವಲಯದ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ.
ಮೃತ ವ್ಯಕ್ತಿ ಯಾರು ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ, ವ್ಯಕ್ತಿ ದೇಹದ ಮೇಲೆ ರೈಲು ಹರಿದ ಪರಿಣಾಮ ದೇಹ ಚಿದ್ರ ಚಿದ್ರವಾಗಿದ್ದು ಕಾಲು ದೇಹ ಸಂಪೂರ್ಣ ಬೇರ್ಪಟ್ಟಿವೆ ಘಟನೆ ಸಂಭವಿಸಿದ ವೇಳೆ ಕ್ಷಣಕಾಲ ಚಲಿಸುತ್ತಿರುವ ರೈಲು ಸ್ಥಳದಲ್ಲಿ ನಿಂತು ಮುಂದೆ ಸಾಗಿದೆ. ವ್ಯಕ್ತಿ ದುರ್ಮರಣಕ್ಕೆ ಈಡಾದ ಬಗ್ಗೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ತನಿಖೆ ನಡೆಸಿದ್ದು ಅವಘಡ ಸಂಭವಿಸಿದ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.
Kshetra Samachara
07/08/2021 04:07 pm