ಧಾರವಾಡ: ಬಿಆರ್ ಟಿಎಸ್ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬನಿಗೆ ಚಿಗರಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಗೆ ಗಂಭೀರ ಸ್ವರೂಪದ ಗಾಯವಾದ ಘಟನೆ ಧಾರವಾಡದ ಟೋಲನಾಕಾ ಬಳಿ ನಡೆದಿದೆ.
ಪೇಯಿಂಟಿಂಗ್ ಕೆಲಸ ಮುಗಿಸಿ ಬರುತ್ತಿದ್ದ ವ್ಯಕ್ತಿಗೆ ಈ ಚಿಗರಿ ಬಸ್ಸು ಗುದ್ದಿದೆ. ಗಾಯಗೊಂಡ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಆ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದರು.
Kshetra Samachara
18/02/2021 09:14 pm