ಧಾರವಾಡ: ಆಟೊ ತೊಳೆಯಲು ಹೋಗಿ ಕೆರೆಯಲ್ಲಿ ಬಿದ್ದು ಚಾಲಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡದ ಕೆಲಗೇರಿಯಲ್ಲಿ ನಡೆದಿದೆ.ಆನಂದನಗರದ ನಿವಾಸಿ ಲಕ್ಷ್ಮಣ ಡೊಳ್ಳಣ್ಣವರ (34) ಎಂಬಾತನೇ ಸಾವನ್ನಪ್ಪಿದ ವ್ಯಕ್ತಿ.
ಲಕ್ಷ್ಮಣ ಅವರು, ಆಟೊ ಕೆರೆಯ ದಂಡೆಯ ಮೇಲೆ ನಿಲ್ಲಿಸಿ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
09/02/2021 12:50 pm