ನವಲಗುಂದ : ಟ್ರ್ಯಾಕ್ಟರ್ ಒಂದು ಬೈಕ್ ಗೆ ಡಿಕ್ಕಿ ಹೊಡೆದು, ಪಾನ್ ಶಾಪ್ ಅಂಗಡಿಗೆ ನುಗ್ಗಿದ ಘಟನೆ ನವಲಗುಂದ ಲಿಂಗರಾಜ್ ವೃತ್ತದಲ್ಲಿ ನಡೆದಿದ್ದು, ಘಟನೆಯಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿವೆ ಎಂದು ತಿಳಿದುಬಂದಿದೆ.
ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ ಬೈಕ್ ಗೆ ಗುದ್ದಿದ್ದಲ್ಲದೆ, ವೃತ್ತದಲ್ಲೇ ಇದ್ದ ಪಾನ್ ಶಾಪ್ ಅಂಗಡಿಗೆ ಡಿಕ್ಕಿ ಹೊಡೆದಿದ್ದು, ಟ್ರ್ಯಾಕ್ಟರ್ ಮತ್ತು ಬೈಕ್ ಎರಡಕ್ಕೂ ಹಾನಿಯಾಗಿದೆ. ಪಾನ್ ಶಾಪ್ ಅಂಗಡಿ ಸಂಪೂರ್ಣ ನೆಲ ಕಚ್ಚಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಟ್ರ್ಯಾಕ್ಟರ್ ಮತ್ತು ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಸ್ಥಳದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಕೂಡ ಆಗಿತ್ತು.
Kshetra Samachara
09/12/2020 11:59 am