ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬೈಕ್ ಗೆ ಟೆಂಪೋ ಡಿಕ್ಕಿ - ಬೈಕ್ ಸವಾರ ಸ್ಥಳದಲ್ಲೆ ಸಾವು..!

ಹುಬ್ಬಳ್ಳಿ : ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಟೆಂಪೋವೊಂದು ಸುಮಾರು 20 ಮೀಟರ್ ಬೈಕ್ ಸಮೇತ ಎಳೆದೊಯ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಅಂಚಟಗೇರಿಗೆ ಹೋಗುತ್ತಿದ್ದ ಟೆಂಪೋ ಹಾಗೂ ಕಲಘಟಗಿ ಕಡೆಯಿಂದ ಬರುತ್ತಿದ್ದ ಬೈಕ್, ಕಾರವಾರ ರಸ್ತೆಯ ಕೆಂಪಗೇರಿಯ ಗಣೇಶ್ ಗುಡಿ ಹತ್ತಿರ ಮುಖಾಮುಖಿ ಡಿಕ್ಕಿಯಾಗಿದೆ.

ಘಟನೆಯಲ್ಲಿ ಹುಬ್ಬಳ್ಳಿ ಅಲ್ತಾಫನಗರದ ನಿವಾಸಿ 23 ವರ್ಷದ ಮೆಹಬೂಬಸಾಬ ತಾರೆಗಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಟೆಂಪೋ ಚಾಲಕ ವೇಗವಾಗಿ ಬರುತ್ತಿದ್ದ ಸಮಯದಲ್ಲಿ ಮುಂದೆ ಬಂದ ಬೈಕಿಗೆ ಡಿಕ್ಕಿ ಹೊಡೆದು, ಅದೇ ವೇಗದಲ್ಲಿ 20 ಮೀಟರ್ ಟೆಂಪೋ ಚಲಿಸಿದೆ.

ರಸ್ತೆಯಲ್ಲಿಯೇ ತೀವ್ರವಾಗಿ ಗಾಯಗೊಂಡಿದ್ದ ಯುವಕ, ಕಿಮ್ಸಗೆ ರವಾನೆಯಾಗುವ ಮುನ್ನವೇ ಸಾವಿಗೀಡಾಗಿದ್ದಾನೆ.

ಅಂಚಟಗೇರಿ ಸಮೀಪ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ರಸ್ತೆ ಧೂಳಿನಿಂದ ತುಂಬಿದ್ದು, ಎದುರಿಗೆ ಬರುವ ವಾಹನಗಳು ಸಡನ್ನಾಗಿ ಕಾಣುವುದೇ ಇಲ್ಲ.

ಹೀಗಾಗಿಯೇ ಘಟನೆ ನಡೆದಿದ್ದು, ಅಪಘಾತ ನಡೆಯುತ್ತಿದ್ದ ಹಾಗೇ ಟೆಂಪೋ ಚಾಲಕ ವಾಹನವನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

09/12/2020 11:45 am

Cinque Terre

50.16 K

Cinque Terre

2

ಸಂಬಂಧಿತ ಸುದ್ದಿ