ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಹೊಲಕ್ಕೆ ಹೋಗಿ ಶೇಂಗಾ ಕಿತ್ತು ಮರಳಿ ಮನೆಗೆ ಧಾವಿಸುತ್ತಿದ್ದ ರೈತರಿಗೆ ಹಳ್ಳದ ಪಕ್ಕದ ಬೇವಿನಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ಮಾಡಿದ ಘಟನೆ ಸಾಯಂಕಾಲದ ವೇಳೆಗೆ ಸಂಭವಿಸಿದೆ.
ತೀವ್ರವಾಗಿ ಹೆಜ್ಜೇನು ಕಡಿತಕ್ಕೆ ಒಳಗಾಗಿ ಗಾಯಗೊಂಡಿದ್ದ ನಾಲ್ಕು ಜನರನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಕಳುಹಿಸಲಾಗಿದೆ.
ಗುಡೇನಕಟ್ಟಿ ಗ್ರಾಮದ ಬರೋಬ್ಬರಿ 20 ಕ್ಕಿಂತ ಅಧಿಕ ರೈತರು ಶೇಂಗಾ ಕಿತ್ತು ಮನೆಗೆ ವಾಪಾಸ್ಸಾಗುವ ವೇಳೆಯಲ್ಲಿ ಈ ಘಟನೆ ನಡೆದಿದ್ದು ಹಳ್ಳ ದಾಟುವಾಗ ಮುಂದೆ ಇದ್ದ ರೈತರು ಪಾರಾಗಿದ್ದು ಹಿಂದೆ ಇದ್ದ ರೈತರಿಗೆ ಹೆಜ್ಜೇನು ಕಚ್ಚಿದ ತಕ್ಷಣ ಎಲ್ಲರೂ ಓಟ ಕಿತ್ತಿದ್ದಾರೆ. ಸದ್ಯ ಹೆಜ್ಜೇನು ಕಡಿತಕ್ಕೆ ಒಳಗಾದವರ ಹೆಸರು ತಿಳಿದು ಬಂದಿಲ್ಲ ಆದರೆ ಈ ಹಳ್ಳದಲ್ಲಿ ಸಂಚರಿಸವವರಿಗೆ ಭಯದ ಗೊಡವೆ ದೂರವಾಗಿಲ್ಲ.
Kshetra Samachara
24/09/2020 10:13 pm