ಬೆಳಗಾವಿ : ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ಉಮೇಶ್ ಅವರ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ.ಹೊರಗೆ ಅಣ್ಣನ ಅಂತಿಮ ದರ್ಶನ ಒಳಗೆ ತಮ್ಮನ ಆರೋಗ್ಯ ತಪಾಸಣೆ ಮಾಡಲಾಗಿದೆ.
ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ರಮೇಶ್ ನಿನ್ನೆಯೇ ಬೆಂಗಳೂರಿಗೆ ರಮೇಶ್ ಕತ್ತಿ ತೆರಳಿದ್ದರು. ಸಹೋದರನ ಸಾವಿನಿಂದ ಅಸ್ವಸ್ಥರಾಗಿರುವ ರಮೇಶ್ ಕತ್ತಿಗೆ ಕೊಠಡಿಯೊಂದರಳೊಗೆ ಇಸಿಜಿ ಪರೀಕ್ಷೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಅಂತಿಮ ದರ್ಶನದ ವೇಳೆಯೇ ಆರೋಗ್ಯದಲ್ಲಿ ಏರುಪೇರಾಗಿದೆ.ರಮೇಶ್ ಕತ್ತಿ ಮಾಜಿ ಸಂಸದ ಹಾಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದು,ನಿನ್ನೆಯಿಂದಲೂ ಸಹ ಅಣ್ಣನ ಸಾವಿನಿಂದ ಕಂಗಾಲಾಗಿ ಮಾನಸಿಕವಾಗಿ ಕುಗ್ಗಿದ್ದಾರೆ.
PublicNext
07/09/2022 09:15 pm