ಹೈದರಾಬಾದ್ : ಕಿಡ್ನಿಯಲ್ಲಿ ಒಂದೆರಡು ಕಲ್ಲುಗಳಾಗುವುದು ಸಾಮಾನ್ಯ ಅದಕ್ಕಾಗಿ ಚಿಕಿತ್ಸೆ ಕೂಡಾ ಇದೆ. ಆದರೆ ಇಲ್ಲೊಬ್ಬನ ಹೊಟ್ಟೆಯಲ್ಲಿ ಒಬ್ಬೋಬ್ಬರಿ 156 ಕಲ್ಲುಗಳು ಪತ್ತೆಯಾಗಿವೆ.
ಹೌದು ಹೈದರಾಬಾದ್ ವೈದ್ಯರು ವ್ಯಕ್ತಿಯೊಬ್ಬನ ಕಿಡ್ನಿಯಿಂದ 156 ಕಲ್ಲುಗಳನ್ನು ಹೊರತೆಗೆದು ಯಶಸ್ವಿಯಾಗಿದ್ದಾರೆ. ಕಲ್ಲುಗಳನ್ನು ತೆಗೆಯಲು ವೈದ್ಯರು ಎಂಡೋಸ್ಕೋಪಿ ಮತ್ತು ಲ್ಯಾಪ್ರೋಸ್ಕೊಪಿ ವಿಧಾನವನ್ನು ಅನುಸರಿಸಿದ್ದಾರೆ. ಲ್ಯಾಪ್ರೋಸ್ಕೋಪಿ ಎನ್ನುವುದು ಕ್ಯಾಮೆರಾದ ಸಹಾಯದಿಂದ ಸಣ್ಣ ಛೇದನವನ್ನು ಬಳಸಿಕೊಂಡು ಹೊಟ್ಟೆ ಅಥವಾ ಮೂತ್ರಪಿಂಡದ ಕುಳಿಯಲ್ಲಿ ಮಾಡುವ ಒಂದು ಕಾರ್ಯಾಚರಣೆಯಾಗಿದೆ. ಹಾಗೇ ಎಂಡೋಸ್ಕೋಪಿ ಎನ್ನುವುದು ದೇಹದ ಒಳಭಾಗವನ್ನು ನೋಡಲು ವೈದ್ಯಕೀಯದಲ್ಲಿ ಬಳಸುವ ಒಂದು ವಿಧಾನವಾಗಿದೆ.
ಕಲ್ಲುಗಳನ್ನು ತೆಗೆಯಲು ವೈದ್ಯರು ಸುಮಾರು 3 ಗಂಟೆಗಳ ಕಾಲ ಆಪರೇಷನ್ ಮಾಡಿದ್ದಾರೆ. ಕಿಡ್ನಿಯಲ್ಲಿದ್ದ ಎಲ್ಲ ಕಲ್ಲುಗಳನ್ನು ತೆಗೆದ ಬಳಿಕ 50 ವರ್ಷದ ಸಂತ್ರಸ್ತ ಚೇತರಿಸಿಕೊಂಡಿದ್ದಾರೆ. ಒಂದೇ ವ್ಯಕ್ತಿಯಲ್ಲಿ 100 ಕ್ಕೂ ಹೆಚ್ಚು ಕಿಡ್ನಿ ಸ್ಟೋನ್ಗಳನ್ನು ತೆಗೆದಿರುವುದು ದೇಶದಲ್ಲೇ ಇದೇ ಮೊದಲು ಎಂದು ವೈದ್ಯರು ಮಾಹಿತಿ ನೀಡಿದರು. ಸಂತ್ರಸ್ತ ವ್ಯಕ್ತಿ ಹುಬ್ಬಳ್ಳಿ ಮೂಲದ ಬಸವರಾಜ್ ಮಡಿವಾಳರ್.
PublicNext
17/12/2021 11:30 am