ಬೆಂಗಳೂರು: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಕೊರೊನಾದಿಂದ ಸಾಕಷ್ಟು ಅನಾಹುತಗಳು ನಡೆದಿರುವ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.
ಇಂತಹ ಡೆಡ್ಲಿ ಕೈಯಿಂದ ಬಚಾವ್ ಆದ ಹಲವರಿಗೆ ಕ್ಷಯ ಕಾಟ ಹೆಚ್ಚಾಗಿದೆ. ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯರೋಗ ಸಮೀಕ್ಷೆಯಲ್ಲಿ ಒಟ್ಟು 225 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 225 ರಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡ 151 ರೋಗಿಗಳಲ್ಲಿ ಟಿಬಿ ಪತ್ತೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಗಸ್ಟ್ 16 ರಿಂದ ಸೆಪ್ಟೆಂಬರ್ 11 ರ ನಡುವೆ ಒಂದು ಬಾರಿ ಮನೆ-ಮನೆಗೆ ಸಮೀಕ್ಷೆ ನಡೆಸಿದ್ದು, ಒಟ್ಟು 7,66,137 ಜನರನ್ನು ಪರೀಕ್ಷಿಸಿದೆ. ಬೆಂಗಳೂರು ನಗರದಲ್ಲಿ(44), ಬಳ್ಳಾರಿ(25), ಮೈಸೂರು(14), ಚಿತ್ರದುರ್ಗ(13), ಕಲಬುರಗಿ(13) ಮತ್ತು ಕೊಪ್ಪಳ(13)ದಲ್ಲಿ ಅತಿಹೆಚ್ಚು ಟಿಬಿ ಪ್ರಕರಣಗಳು ವರದಿಯಾಗಿವೆ. ವಿಜಯಪುರ, ಕೋಲಾರ ಮತ್ತು ಯಾದಗಿರಿಯಲ್ಲಿ ಯಾವುದೇ ಟಿಬಿ ಪ್ರಕರಣಗಳು ವರದಿಯಾಗಿಲ್ಲ.
ಟಿಬಿ ಕಾಣಿಸಿಕೊಂಡಿರುವ 151 ಜನರಿಗೆ ಈ ವರ್ಷದ ಜನವರಿ ಮತ್ತು ಜೂನ್ ನಡುವೆ ಕೋವಿಡ್ ಸೋಂಕು ತಗುಲಿತ್ತು.
PublicNext
21/09/2021 03:44 pm