ಚಾಮರಾಜನಗರ: ಕಳೆದ 7 ತಿಂಗಳ ಬಳಿಕ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂದು (ಸೋಮವಾರ) ಯಾವುದೇ ಕೋವಿಡ್-19 ಪ್ರಕರಣ ವರದಿಯಾಗಿಲ್ಲ.
ಈ ಬಗ್ಗೆ ವರದಿ ನೀಡಿರುವ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯದ ಮುಖ್ಯಸ್ಥರು, ''ಭಾನುವಾರ ಸಂಗ್ರಹಿಸಲಾದ 397 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ದ್ರವ ಮಾದರಿ ಪರೀಕ್ಷೆಯನ್ನು ಪ್ರಯೋಗಾಲಯವು ಸೋಮವಾರ ಪೂರ್ಣಗೊಳಿಸಿದ್ದು ಯಾವುದೇ ಮಾದರಿಯಲ್ಲೂ ಕೋವಿಡ್-19 ದೃಢೀಕೃತವಾಗಿಲ್ಲ ಎಂದು ತಿಳಿಸಿದೆ.
ಕಳೆದ 7 ತಿಂಗಳ ಬಳಿಕ ಶೂನ್ಯ ಕೋವಿಡ್ ಪ್ರಕರಣ ವರದಿಯಾಗುವ ಮೂಲಕ ಜಿಲ್ಲೆ ಗಮನಸೆಳೆದಿದೆ. ಆದರೆ ಪ್ರತಿ ದಿನ ಸರಾಸರಿ 1,400 ರಷ್ಟು ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿತ್ತು. ಭಾನುವಾರ 393 ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ. ಹೀಗಾಗಿ ದೃಢೀಕೃತ ಪ್ರಕರಣ ಕಂಡುಬಂದಿಲ್ಲ. ಎಂದಿನಂತೆ 1,300-1,400 ಮಾದರಿಗಳನ್ನು ಪರೀಕ್ಷಿಸಿದ್ದರೆ ನೈಜ ಫಲಿತಾಂಶ ಲಭ್ಯವಾಗುತ್ತಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಶೂನ್ಯವಾಗಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ.
PublicNext
11/01/2021 08:15 pm