ಮಾಸ್ಕ್ ಹಾಕದವರಿಗೆ ಬುದ್ಧಿ ಹೇಳಿ ಹೇಳಿ, ದಂಡ ಹಾಕಿ ಹಾಕಿ ಪೊಲೀಸ್ರು ಹೈರಾಣಾಗಿ ಹೋಗಿದ್ದರೆ. ಬೇಸತ್ತ ಪೊಲೀಸರು ಕೊನೆಗೆ ಒಂದು ಪ್ರಯೋಗಕ್ಕೆ ಇಳಿದಿದ್ದಾರೆ. ಅದೇನಂದ್ರೆ ಮಾಸ್ಕ್ ಹಾಕದೇ ಉಡಾಫೆ ತೋರುವವರಿಗೆ 10 ತಾಸು ಬಂಧನದ ಶಿಕ್ಷೆ
ದೆಹಲಿ ಪೊಲೀಸರು ಈಗಾಗಲೇ ಈ ಕ್ರಮ ಜಾರಿಗೊಳಿಸಿದ್ದಾರೆ. ಮಾಸ್ಕ್ ಹಾಕದವರನ್ನು ಹಿಡಿದು ಹೀಗೆ ಪೊಲೀಸ್ ವಾಹನದಲ್ಲಿ 10 ತಾಸು ಕೂಡಿ ಹಾಕುತ್ತಿದ್ದಾರೆ. ಒಂದು ನಿಮಿಷವೂ ನಿಂತಲ್ಲಿ ನಿಲ್ಲದೇ ಕೂತಲ್ಲಿ ಕೂರದೇ ಹಾಯಾಗಿ ಓಡಾಡಿಕೊಂಡಿದ್ದವರು ಈಗ ಪೊಲೀಸ್ ವಾಹನದಲ್ಲಿ ಸಿಕ್ಕು ತೊಳಲಾಡುತ್ತಿದ್ದಾರೆ. ಆದ್ರೆ ಇದಕ್ಕೆ ಪರ-ವಿರೋಧದ ಚರ್ಚೆಯೂ ಶುರುವಾಗಿದೆ. ಎಲ್ಲರನ್ನೂ ಒಂದೆಡೆ ಸೇರಿಸಿದ್ರೆ ಕೊರೊನಾ ಬರೋದಿಲ್ವಾ ಅಂತ ಕೆಲವರು ಹೇಳಿದ್ರೆ ಪೊಲೀಸರು ಸರಿಯಾಗಿಯೇ ಮಾಡಿದ್ದಾರೆ ಬಿಡಿ ಅಂತ ಕೆಲವರು ವಾದಿಸ್ತಿದ್ದಾರೆ. ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ.
PublicNext
25/11/2020 09:12 am