ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ : ಯಾದಗಿರಿ ಜಿಲ್ಲಾಡಳಿತದಿಂದ ಜನ ಸಾಮಾನ್ಯರಿಗೊಂದು ರೂಲ್ಸ್.. ರಾಜಕೀಯ ಮುಖಂಡರಿಗೊಂದು ರೂಲ್ಸ್.. ಯಸ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತವಾಗಿ ನಿನ್ನೆಯಿಂದ ಆಗಸ್ಟ್ 30ರವರೆಗೆ ಪ್ರತಿನಿತ್ಯ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ಅಲ್ಲದೇ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡೆ ಹಾಗೂ ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸಿರುವ ಜಿಲ್ಲಾಡಳಿತ ನಿಯಮಗಳನ್ನ ಬಿಜೆಪಿ ನಾಯಕರು ಇಂದು ಬ್ರೇಕ್ ಮಾಡಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಭಾ ನೇತೃತ್ವದ ಜನಾರ್ಶೀವಾದ ಯಾತ್ರೆಯಲ್ಲಿ ಸಾವಿರಾರು ಜನರು ಖೂಭಾ ಅವರನ್ನ ಸ್ವಾಗತಿಸಲು ಮಾಸ್ಕ್ ಧರಿಸಿದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಇನ್ನು ಕೋವಿಡ್ ನಿಯಮ ಪಾಲನೆ ಮಾಡಿ ಜೀವ ಉಳಿಸಿಕೊಳ್ಳಿ ಅಂತಾ ಹೇಳುವ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು ಭಗವಂತ ಖೂಭಾ ಅವರಿಗೆ ಜೆಸಿಬಿ ಮೂಲಕ ಹೂ ಮಳೆ ಸುರಿಸಿದ್ದಾರೆ, ನಾ ಮುಂದು ತಾ ಮುಂದು ಎನ್ನವಂತೆ ಜನ ಜಾತ್ರೆ ಮಾಡಿರುವ ದೃಶ್ಯ ಕಂಡು ಬಂದಿದೆ.
ಇಷ್ಟೇಲ್ಲಾ ನಡೆದ್ರು ಕೂಡಾ ಜಿಲ್ಲಾಡಳಿತ ಮಾತ್ರ ಕಂಡರೂ ಕಾಣದಂತೆ ರಾಜಕೀಯ ನಾಯಕರ ವಿಷಯದಲ್ಲಿ ಮೌನವಹಿಸಿದ್ದು, ಮಾತ್ರ ಖಂಡನೀಯ.
PublicNext
18/08/2021 06:42 pm