ಕೊಪ್ಪಳ:ಕೋವಿಡ್ ಕಾರಣ ಐತಿಹಾಸಿಕ ಅಂಜನಾದ್ರಿ ಬೆಟ್ಟವನ್ನ ನಾಳೆಯಿಂದ ಮೂರು ದಿನಗಳ ಕಾಲ ಕ್ಲೋಸ್ ಮಾಡಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾಕಷ್ಟು ಜನ ಆಗಮಿಸುತ್ತಾರೆ. ಹಾಗಾಗಿಯೇ ಈಗ ಬೆಟ್ಟಕ್ಕೆ ಭಕ್ತರ ಆಗಮನವನ್ನ ನಿಷೇಧಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರೋ ಅಂಜನಾದ್ರಿ ಬೆಟ್ಟಕ್ಕೆ ಹೊರ ರಾಜ್ಯದಿಂದಲೂ ಸಾಕಷ್ಟು ಜನ ಬರುತ್ತಾರೆ. ಅದಕ್ಕೇನೆ ಮೂರು ದಿನ ಈ ಬೆಟ್ಟಕ್ಕೆ ಕ್ಲೋಸ್ ಆಗುತ್ತಿದೆ.
ಇದೇ 15 ರಂದು ಗಂಗಾವತಿಯ ಚನ್ನಬಸವ ತಾತನವರ ಜಾತ್ರೆ ಇತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿಯೇ ಈ ಜಾತ್ರೆಗೂ ನಿರ್ಬಂಧ ಹೇರಲಾಗಿದೆ. ಗಂಗಾವತಿಯ ದುರ್ಗಮ್ಮ ದೇವಿ ಜಾತ್ರೆ ಇದೇ 17 ನಡೆಯಬೇಕಿತ್ತು.ಈಗ ಇದು ಕೂಡ ರದ್ದಾಗಿದೆ.
PublicNext
13/01/2022 10:04 am