ನಮಗೆ ಮನೆ ಗೆಲಸ ಅಂದ್ರೆ ಅಸಡ್ಡೆ.ಜಿಮ್ ನಲ್ಲಿ ವರ್ಕೌಟ್ ಮಾಡೋದು ಅಂದ್ರೆ ಬಲು ಇಷ್ಟ.ಆದರೆ ಸತ್ಯ ಬೇರೆನೆ ಇದೆ. ದೇಹದ ತೂಕ ಇಳಿಸಿಕೊಳ್ಳಲು ನಾವು ಜಿಮ್ ಗೆ ಹೋಗೋದೇ ಬೇಡ. ಈ ಕೆಲಸ ಮಾಡಿದ್ರೆ, ಒಂದು ವಾರಕ್ಕೆ ೨,೩೦೦ ಕ್ಯಾಲರಿ ಕರಗುತ್ತದೆ. ಈ ಲೆಕ್ಕದಂತೆ ತಿಂಗಳಿಗೆ 1 ಕೆ.ಜಿ. ತೂಕ ಇಳಿಸಿಕೊಳ್ಳಬಹುದು. ಇಲ್ಲಿದೆ ಆ ಇತರ ಡಿಟೈಲ್ಸ್ ಓದಿ.
ಮನೆಗೆಲಸ. ಹೌದು. ನಾವು ಹೇಳಿದ್ದು ಅದನ್ನ. ಸರಳವಾದ ಮತ್ತು ಮಧ್ಯಮ ವೇಗದಲ್ಲಿಯೇ 11 ರಿಂದ 12 ಗಂಟೆ ಮನೆ ಕೆಲಸ ಮಾಡಿದರೆ ನಿಮ್ಮ ದೇಹದ ಕೊಬ್ಬು ಕರಗುತ್ತದೆ. ದೇಹವೂ ಚೈತನ್ಯದಿಂದಲೇ ಕೂಡಿರುತ್ತದೆ.
ಮನೆ ಕೆಲಸ ಮಾಡಿದ್ರೆ ದೇಹದ ತೂಕ ಇಳಿಯುತ್ತದೆ
-ಮನೆಯ ನೆಲ ಒರಿಸೋದು:
ಇದನ್ನ ಮಾಡಿದ್ರೆ ಕೈ ಮತ್ತು ಕಾಲುಗಳ ಸ್ನಾಯುಗಳಿಗೆ ವರ್ಕೌಟ್ ಆಗುತ್ತದೆ. ಭುಜ ಮತ್ತು ಬೆನ್ನು ಕೂಡ ಗಟ್ಟಿಯಾಗುತ್ತದೆ. ದೇಹದ ತೂಕವೂ ಇಳಿಯುತ್ತದೆ.
-ಮನೆ ಧೂಳು ತೆಗೆಯುವ ಕೆಲಸ:
ಧೂಳು ತೆಗೆಯುವದನ್ನ ಯಾರೂ ಮಾಡಲು ಇಷ್ಟಪಡೋದಿಲ್ಲ. ಇದನ್ನ ಮಾಡಿದರೆ,ಹೊಟ್ಟೆ ಭಾಗದ ಕೊಬ್ಬು ಕರಗಲು ಅನುಕೂಲವಾಗುತ್ತದೆ. ಇದನ್ನ ಪುನರಾವರ್ತನೆ ಮಾಡೋದ್ರಿಂದ ದೇಹದ ಇತರ ಭಾಗಕ್ಕೂ ಕೆಲಸ ಕೊಟ್ಟಂತೆ ಆಗುತ್ತದೆ.
-ಬಟ್ಟೆ ಒಗೆಯಿರಿ ದೇಹ ಗಟ್ಟಿ ಆಗ್ತದೆ
ಬಟ್ಟೆ ಒಗೆಯುವದರಿಂದ ಕಾಲು-ಕೈಗಳು-ಹೊಟ್ಟೆ ಭಾಗಕ್ಕೆ ವ್ಯಾಯಾಮ ಆಗುತ್ತದೆ. ಬಟ್ಟೆಯನ್ನ ನೀರಿನಿಂದ ತೆಗೆಯುವುದು ಗಟ್ಟಿಯಾಗಿಯೇ ಅವುಗಳನ್ನ ಹಿಂಡುವುದು, ಅವುಗಳನ್ನ ಬಿಸಿಲಿನಲ್ಲಿ ಹರಡುವುದನ್ನ ಮಾಡೊದ್ರಿಂದ, ದೇಹಕ್ಕೆ ಕೆಲಸ ಕೊಟ್ಟ ಹಾಗೆ ಆಗುತ್ತದೆ. ಇದರಿಂದ ದೇಹದ ತೂಕ ಇಳಿಯುತ್ತದೆ. ಒಟ್ಟಾರೆ, ಮನೆ ಗೆಲಸ ಯಾವ ಜಿಮ್ ವರ್ಕೌಟ್ ಗಿಂತಲೂ ಕಡಿಮೆ ಇಲ್ಲ. ಒಮ್ಮೆ ಟ್ರೈ ಮಾಡಿ ನೋಡಿ.
PublicNext
03/11/2021 04:29 pm