ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಬ್ಬದೂಟ ಹೆಚ್ಚಾಗಿ ಶುರುವಾಗುವ ಸಂಕಟಕ್ಕೆ ಸಿಂಪಲ್ ಪರಿಹಾರ

ಸದ್ಯ ಬೆಳಕಿನ ಹಬ್ಬ ದೀಪಾವಳಿಯ ಹೊಸ್ತಿಲಲ್ಲಿ ಇರುವ ನಾವು ನೀವೆಲ್ಲಾ ಬಗೆ ಬಗೆಯ ಅಡುಗೆ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ ಹಬ್ಬವನ್ನು ಎಂಜಾಯ್ ಮಾಡುತ್ತೇವೆ.

ಆದ್ರೆ ಹಬ್ಬದಲ್ಲಿ ಊಟ ಹೆಚ್ಚಾಗುತ್ತಿದ್ದಂತೆ ಕೆಲವು ಸಂಕಟಗಳು ಶುರುವಾಗುತ್ತವೆ. ಅವುಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಸಿಂಪಲ್ ಟ್ರಿಕ್ಸ್ ಬಳಸಿ ಮತ್ತೆ ಹಬ್ಬವನ್ನು ಎಂಜಾಯ್ ಮಾಡಿ.

ಹಸಿ ಶುಂಠಿ, ಹಸಿ ಅರಿಶಿಣ, ದಾಲ್ಚಿನ್ನಿ ಚೂರು ಹಾಗೂ ಅರ್ಧ ನಿಂಬೆಹಣ್ಣು ತೆಗೆದುಕೊಳ್ಳಿ. ಮೊದಲಿಗೆ ಹಸಿ ಶುಂಠಿ ಹಾಗೂ ಹಸಿ ಅರಿಶಿಣವನ್ನು ಸಣ್ಣಗೆ ತುರಿದುಕೊಳ್ಳಿ. ಅದನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ಅದಕ್ಕೆ ದಾಲ್ಚಿನ್ನಿ ಚೂರು ಹಾಗೂ ಅರ್ಧ ನಿಂಬೆ ರಸ ಹಾಕಿ 10 ನಿಮಿಷ ಕುದಿಸಿ. ಬಳಿಕ ಸಿದ್ಧವಾಗುವ ಪೇಯವನ್ನು ಸೇವಿಸಿ. ಅರ್ಧ ಗಂಟೆಯೊಳಗೆ ನಿಮ್ಮ ಹೊಟ್ಟೆ ಸರಿ ಹೋಗುತ್ತದೆ.

Edited By : Nirmala Aralikatti
PublicNext

PublicNext

02/11/2021 03:26 pm

Cinque Terre

22.39 K

Cinque Terre

0