ನ್ಯೂಯಾರ್ಕ್(ಅಮೆರಿಕ) ವಿಮಾನದಲ್ಲಿ ಪಯಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಹೊರಗೆ ನೆಗೆಟಿವ್ ವರದಿ ಬಂದಿತ್ತು. ವಿಮಾನದೊಳಗೆ ಪಯಣಿಸುತ್ತಿರುವಾಗ ಪರೀಕ್ಷೆ ನಡೆಸಿದಾಗ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ಸಿಬ್ಬಂದಿಗೆ ಗೊತ್ತಾಗಿದೆ. ಹೀಗಾಗಿ ವಿಮಾನದ ಟಾಯ್ಲೆಟ್‌ನಲ್ಲೇ ಪಾಸಿಟಿವ್ ಪತ್ತೆಯಾದ ಮಹಿಳೆಯನ್ನು ಸಿಬ್ಬಂದಿ ಕ್ವಾರಂಟೈನ್ ಮಾಡಿದ್ದಾರೆ.
ಅಚ್ಚರಿ ಎಂದರೆ ವಿಮಾನ ಪ್ರಯಾಣಕ್ಕೂ ಮುನ್ನ ಮಹಿಳೆಗೆ ಐದು ಬಾರಿ ರ್ಯಾಪಿಡ್ ಟೆಸ್ಟ್ ಹಾಗೂ ಆರ್.ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ನೆಗೆಟಿವ್ ಎಂದು ವರದಿ ಬಂದಿತ್ತು. ಅದಾದ ನಂತರವೇ ವಿಮಾನ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಮಹಿಳೆಯ ದುರಾದೃಷ್ಟಕ್ಕೆ ವಿಮಾನದೊಳಗೆ ಕುಳಿತಾಗ ಸಿಬ್ಬಂದಿ ಆಕೆಗೆ ಪಾಸಿಟಿವ್ ಇರೋದನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ವಿಮಾನದ ಟಾಯ್ಲೆಟ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಪ್ರಯಾಣದ ವೇಳೆ ನನಗೆ ಪಾಸಿಟಿವ್ ಪತ್ತೆಯಾಗಿದ್ದು ತಿಳಿದಾಗ ನನಗೆ ಅಳು ಬಂತು. ನನ್ನವರೊಂದಿಗೆ ಊಟ ಮಾಡಿದ್ದೇನೆ. ಪ್ರಯಾಣದಲ್ಲಿ ಅನೇಕರೊಂದಿಗೆ ಬೆರೆತಿದ್ದೇನೆ. ಈ ಎಲ್ಲ ವಿಷಯ ನೆನೆದು ನನಗೆ ಭಯ ಆಯಿತು ಎಂದು ಶಿಕ್ಷಕಿಯೂ ಆಗಿರುವ ಮಹಿಳೆ ಹೇಳಿಕೊಂಡಿದ್ದಾರೆ.
PublicNext
31/12/2021 09:28 pm