ವಾಷಿಂಗ್ಟನ್ : ವಿಶ್ವದಾದ್ಯಂತ ಡೆಡ್ಲಿ ಸೋಂಕು ಕೊರೊನಾ ಹಾವಳಿ ತಗ್ಗುವಂತೆ ಕಾಣುತ್ತಿಲ್ಲ.
ಅಮೆರಿಕಾ ದೇಶದಲ್ಲಿ 10 ಲಕ್ಷ ಮಂದಿಗೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದೆ ಎಂದು ಅಮೆರಿಕಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಸೋಂಕು ಕಾಣಿಸಿಕೊಂಡಾಗಿನಿಂದ ನವೆಂಬರ್ 12 ರವರೆಗೆ ಅಮೆರಿಕಾದಲ್ಲಿ 10,39,464 ಮಕ್ಕಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.
ಕಳೆದ ವಾರ ಅಮೆರಿಕಾದಲ್ಲಿ 1,11,946 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.
ದಡಾರ, ಪೋಲಿಯೊ ಲಸಿಕೆ ಹಾಕಿಸಲಾದ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ಸಾಲಿಗೋಜಾ ಹೇಳಿದ್ದಾರೆ.
ಪುಟ್ಟ ಮಕ್ಕಳಗೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಮೆರಿಕಾ ಸರ್ಕಾರ ರಾಷ್ಟ್ರೀಯ ಕಾರ್ಯತಂತ್ರವನ್ನು ತಕ್ಷಣ ಜಾರಿಗೆ ತರಬೇಕೆಂದು ಡಾ. ಗೋಜಾ ಒತ್ತಾಯಿಸಿದ್ದಾರೆ.
PublicNext
17/11/2020 08:35 am