ದಾವಣಗೆರೆ: ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಎಲ್ಲೇಡೆ ಯೋಗಾಸನ ಮಾಡುವ ಸುದ್ದಿಗಳನ್ನು ಕೇಳುತ್ತಿದ್ದೇವೆ.
ಆದ್ರೆ ಇಲ್ಲೊಬ್ಬ 80ರ ಯುವತಿ ನೀರಿನಲ್ಲಿ ಮಾಡುವ ವಿವಿಧ ಬಗೆಯ ಯೋಗಾಸನಗಳನ್ನು ಕಂಡರೆ ನಿಜಕ್ಕೂ ಶಾಕ್ ಆಗತ್ತೆ.
ಹೌದು ದಾವಣಗೆರೆ ನಗರದ ನಿವಾಸಿ ಇಂದಿರಮ್ಮ ನೀರಿನಲ್ಲಿ ಲೀಲಾಜಾಲವಾಗಿ ವಿವಿಧ ಯೋಗಾಸನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಕೆರೆಗಳಲ್ಲಿ ಈಜುವ ಅಭ್ಯಾಸ ಮಾಡಿಕೊಂಡಿದ್ದ ಇಂದಿರಮ್ಮ, ಇಳಿವಯಸ್ಸಲ್ಲೂ ಯಾವುದೇ ಕೆರೆಕಟ್ಟೆಯಲ್ಲಿ ಈಜಬಲ್ಲರು.
PublicNext
21/06/2022 01:06 pm