ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗಾಂಗ ದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದ 19 ಯುವಕ

ಮೈಸೂರು:ಮಂಡ್ಯ ಜಿಲ್ಲೆಯ ಮಳವಳ್ಳಿಯ ಯುವ ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. 6 ಜನರ ಬಾಳಿಗೂ ಬೆಳಕಾಗಿ ಹೋಗಿದ್ದಾನೆ.

ಮಳವಳ್ಳಿಯ 19 ವರ್ಷದ ಶರತ್ ಗೆ ಡಿ. 25 ರಂದು ಮಳವಳ್ಳಿ ಬಳಿ ಅಪಘಾತವಾಗಿತ್ತು.ಇದರಲ್ಲಿ ಗಾಯಗೊಂಡಿದ್ದ ಶರತ್ ಮಿದಳು ನಿಷ್ಕ್ರಿಯಗೊಂಡಿತ್ತು.ಆದರೆ ಈಗ ಶರತ್ ಇಲ್ಲ.ಅವನ ಅಂಗಾಂಗವನ್ನ ಮೈಸೂರಿನ ಅಪೋಲೋ ಆಸ್ಪತ್ರೆ ಮೂಲಕ ದಾನ ಮಾಡಲಾಗಿದೆ.

ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾ ದಾನ ಮಾಡಲಾಗಿದೆ. ಇವುಗಳಲ್ಲಿ 1 ಕಿಡ್ನಿ, 1 ಯಕೃತ್ತು, ಮೇದೋಜೀರಕ ಗ್ರಂಥಿ ಅಪೋಲೊ ಆಸ್ಪತ್ರೆಗೆ ಕೊಡಲಾಗಿದೆ. 1 ಕಿಡ್ನಿ ಬೆಂಗಳೂರಿನ ಐಎನ್‌ಯು ಗೆ.ಹೃದಯ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾನ ಮಾಡಲಾಗಿದೆ. ಕಾರ್ನಿಯಾ ಮೈಸೂರಿನ ಕಣ್ಣಿನ ಬ್ಯಾಂಕ್‌ಗೆ ಕೊಟ್ಟಿ ಸಾರ್ಥಕತೆ ಮೆರೆದಿದ್ದಾನೆ ಶರತ್.

Edited By :
PublicNext

PublicNext

27/12/2021 09:49 am

Cinque Terre

48.74 K

Cinque Terre

13

ಸಂಬಂಧಿತ ಸುದ್ದಿ