ಗದಗ: ತಾಯಿ ಮೃತ ಪಟ್ಟಿದರೂ ವೈದ್ಯರು ಸಮಯೋಚಿತ ನಡೆಯಿಂದ ಅವರ ಉದರದಲ್ಲಿದ್ದ ಮಗುವನ್ನು ಬದುಕಿಸಿದ ಅಪರೂಪದ ಘಟನೆ ಗದಗದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಅನ್ನಪೂರ್ಣ ಅಬ್ಬಿಗೇರಿ ಎಂಬುವರಿಗೆ ನ.4 ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸಂಪರ್ಕಿಸಿದ್ದಾಗ ಅಲ್ಲಿನ ವೈದ್ಯರು ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಹೆರಿಗೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಗದಗ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬರುವ ವೇಳೆಗೆ ಲೋ ಬಿಪಿ ಹಾಗೂ ಮೋರ್ಚೆ ರೋಗದಿಂದ ಸಾವನ್ನಪ್ಪಿದರು ಆದರೆ ತಾಯಿ ಗರ್ಭದಲ್ಲಿದ್ದ ಮಗು ಮಾತ್ರ ಜೀವಂತವಾಗಿದ್ದು, ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತರಾದ ಆಸ್ಪತ್ರೆಯ ವೈದ್ಯರು ಕುಟುಂಬದವರ ಮನವೊಲಿಸಿ 10 ನಿಮಿಷದಲ್ಲಿ ಆಪರೇಷನ್ ಮಾಡಿ ಮಗುವಿನ ಜೀವ ಉಳಿಸಿದ್ದಾರೆ.
ಒಟ್ಟಿನಲ್ಲಿ ಮೃತ ತಾಯಿಯ ಉದರದಲ್ಲಿದ್ದ ಮಗುವಿಗೆ ವೈದ್ಯರು ಮರು ಜನ್ಮ ನೀಡಿದಂತಾಗಿದ್ದು, ವೈದ್ಯರ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.
PublicNext
13/11/2021 01:18 pm