ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಕೆಗೆ ನಾಯಿ ಅಂದ್ರೆ ಮುದ್ದು: ಅದರ ಮೂತ್ರವೇ ಮನೆಮದ್ದು

ವಾಷಿಂಗ್ಟನ್: ಮಹಿಳೆಯರಿಗೆ ಅದೆಷ್ಟೇ ವಯಸ್ಸಾದರೂ ಚಿರಕನ್ಯೆಯಂತೆ ಕಾಣಬೇಕು. ಹಾಲಿನಂತ ತ್ವಚೆ ತನಗಿರಬೇಕು ಎಂದು ಬಯಸುತ್ತಾರೆ‌. ಅದಕ್ಕಾಗಿ ಅವರು ನೂರೆಂಟು ಕಸರತ್ತು ಮಾಡ್ತಾರೆ. ಸ್ಥಿತಿವಂತ ಮಹಿಳೆಯರು ಲಕ್ಷಾಂತರ ಖರ್ಚು ಮಾಡ್ತಾರೆ. ಆದ್ರೆ ಇಲ್ಲೊಬ್ಬ‌ ಮಹಿಳೆ ಸುಂದರ ತ್ವಚೆಗಾಗಿ ತಾನೇ ಸಾಕಿದ ನಾಯಿಯ ಮೂತ್ರ ಕುಡೀತಿದ್ದಾಳೆ.

ಏನಪ್ಪಾ ಇದು ವಿಚಿತ್ರ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಇದು ಸತ್ಯ. ನಾಯಿಯನ್ನು ಅಮೆರಿಕ ಮಂದಿ ತಮ್ಮ ಮನೆಯ ಸದಸ್ಯನಂತೆ ಮುದ್ದಾಗಿ ಸಾಕ್ತಾರೆ. ಪ್ರೀತಿಯಿಂದ ಅದರ ಅವಶ್ಯಕತೆಗಳನ್ನ ಪೂರೈಸುತ್ತಾರೆ. ಅದೇ ಅಮೆರಿಕ ಮೂಲದ ಲೀನಾ ಎಂಬ ಈ ಮಹಿಳೆ ತನ್ನ ಕೋಮಲ ತ್ವಚೆಯ ರಹಸ್ಯ ನಾಯಿಯ ಮೂತ್ರ ಎನ್ನುತ್ತಾಳೆ..!

ಪ್ರತಿದಿನ ನಾನು ನಾಯಿ ಮೂತ್ರ ಕುಡಿಯುತ್ತೇನೆ‌. ಇದರಿಂದ ನನ್ನ ಮುಖದ ಮೇಲೆ ಮೊದಲಿದ್ದ ಮೊಡವೆಗಳು ಈಗ ಮಾಯವಾಗಿವೆ. ನನ್ನ ತ್ಚಚೆ ಮೊದಲಿಗಿಂತ ಸುಂದರವಾಗಿದೆ ಎನ್ನುತ್ತಾಳೆ ಹಾಲುಗೆನ್ನೆಯ ಸುಂದರಿ ಲೀನಾ. ಈ ಸಂಗತಿ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Edited By : Nagaraj Tulugeri
PublicNext

PublicNext

13/01/2021 11:42 am

Cinque Terre

77.64 K

Cinque Terre

9