ಬೆಂಗಳೂರು : ಕೊರನಾದಿಂದ ಕಂಗೆಟ್ಟ ರಾಜ್ಯದ ಜನಕ್ಕೆ ಈಗ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಆತಂಕ ಶುರುವಾಗಿದೆ.
ಸದ್ಯ ಮಂಕಿಪಾಕ್ಸ್ ಪ್ರಕರಣಗಳ ಆತಂಕದ ಹಿನ್ನೆಲೆಯಲ್ಲಿ ಶಂಕಿತ ಪ್ರಕರಣಗಳು ವರದಿಯಾದಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಜೊತೆಗೆ ನೋಡಲ್ ಅಧಿಕಾರಿಯಾಗಿ ಡಾ.ಎನ್.ಶ್ರೀನಿವಾಸ್ ಅವರನ್ನು ನೇಮಿಸಿದೆ. ಶಂಕಿತ ಪ್ರಕರಣಗಳು ವರದಿಯಾದರೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದ್ದು, ಜಿಲ್ಲಾಸ್ಪತ್ರೆಗಳಲ್ಲಿ ಕನಿಷ್ಟ ಎರಡು ಬೆಡ್ ಗಳನ್ನು ಮೀಸಲಿಡಬೇಕೆಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ಜನ್ ಗಳಿಗೆ ಸೂಚನೆ ನೀಡಿದೆ.
ಮಂಕಿಪಾಕ್ಸ್ ಶಂಕಿತ ಪ್ರಕರಣಗಳು ವರದಿಯಾದರೆ ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು. ಬೆಂಗಳೂರಿನ ಇಂದಿರಾನಗರದ ಸಾಂಕ್ರಾಮಿಕ ರೋಗ ಆಸ್ಪತ್ರೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದೆ.
PublicNext
07/06/2022 12:53 pm