ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಟ್ ಕರ್ಫ್ಯೂ ಅಗತ್ಯವೆಂಬುದಕ್ಕೆ ಆಧಾರವೇ ಇಲ್ಲ: ಸೌಮ್ಯಾ ಸ್ವಾಮಿನಾಥನ್

ನವದೆಹಲಿ: ಹೆಮ್ಮಾರಿ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದಂತೆ ಸರ್ಕಾರ ಮೊದಲು ನೈಟ್ ಕರ್ಫ್ಯೂ ಜಾರಿ ಮಾಡುತ್ತದೆ.ಇದು ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದು ಎಲ್ಲರ ಪ್ರಶ್ನೆ ಇದರ ಮಧ್ಯೆ ಭಾರತದಲ್ಲಿ ರಾತ್ರಿ ಕರ್ಫ್ಯೂಗಳ ಹಿಂದೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ವೈಜ್ಞಾನಿಕ ಆಧಾರಿತ ನೀತಿಗಳನ್ನು ರೂಪಿಸಬೇಕು ಎಂದು WHO ನ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಕೋವಿಡ್ ರೂಪಾಂತರಗಳ ಹರಡುವಿಕೆಯನ್ನು ನಿಭಾಯಿಸಲು ಭಾರತದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ, ಇದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಒತ್ತಿ ಹೇಳಿದ್ದಾರೆ.

ರಾತ್ರಿ ಕರ್ಫ್ಯೂ ಮುಂತಾದ ವಿಷಯಗಳು, ಅದರ ಹಿಂದೆ ಯಾವುದೇ ವಿಜ್ಞಾನವಿಲ್ಲ. ಸಾಕ್ಷ್ಯಾಧಾರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾರ್ವಜನಿಕ ಆರೋಗ್ಯ ಕ್ರಮಗಳ ಸಂಪೂರ್ಣ ಪಟ್ಟಿ ಇದೆ ಎಂದು ಅವರು ತಿಳಿಸಿದ್ದಾರೆ. ಮನರಂಜನಾ ಸ್ಥಳಗಳು ಈ ವೈರಸ್ ಗಳು ಹೆಚ್ಚು ಹರಡುವ ಸ್ಥಳಗಳಾಗಿವೆ. ಅಲ್ಲಿ ಕೆಲವು ನಿರ್ಬಂಧಗಳನ್ನು ತರುವುದು ಸಹಜ. ಭಾರತೀಯರು ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು, ಆದರೆ ಭಯಪಡಬಾರದು ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

01/01/2022 12:48 pm

Cinque Terre

36.6 K

Cinque Terre

2

ಸಂಬಂಧಿತ ಸುದ್ದಿ