ನವದೆಹಲಿ: ವ್ಯಾಕ್ಸಿನ್ ವಿಚಾರವಾಗಿ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಕೊರೊನಾ ಮಟ್ಟಹಾಕಲು ಬಳಕೆಯಲ್ಲಿರುವ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ದಿನ ದೂರವಿಲ್ಲ ಅನ್ನೋ ಸುಳಿವು ಸಿಕ್ಕಿದೆ.
ದೇಶದ ಮಾರುಕಟ್ಟೆಯಲ್ಲಿ ಕೊವಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯನ್ನು ಮುಕ್ತಗೊಳಿಸುವ ಕುರಿತು ಕೇಂದ್ರ ಔಷಧ ಪ್ರಾಧಿಕಾರದ ಪರಿಣಿತರ ಸಮಿತಿ ಶಿಫಾರಸು ಮಾಡಿದೆ. ದೇಶದಲ್ಲಿ ಕೊರೊನಾ ಲಸಿಕೆಗಳು ಸುಲಭವಾಗಿ ಸಿಗುವ ನಿಟ್ಟಿನಲ್ಲಿ ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ ಮಾಡಿರೋ ಶಿಫಾರಸನ್ನು ಡಿಜಿಸಿಐಗೆ ಕಳುಹಿಸಿಕೊಡಲಾಗಿದೆ.
ಕಳೆದ ಡಿಸೆಂಬರ್ 31ರಂದು ಕೋವಿಶೀಲ್ಡ್ ತಯಾರಿಸೋ ಪುಣೆ ಮೂಲದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಗಳು ಮುಕ್ತ ಮಾರುಕಟ್ಟೆಗೆ ಲಸಿಕೆ ಬಿಡುಗಡೆ ಮಾಡಲು ಅವಕಾಶ ಕೋರಿತ್ತು. ಈ ಮನವಿಯನ್ನು ಸ್ವೀಕರಿಸಿದ್ದ ಡಿಜಿಸಿಐಯ ಸಬ್ಜೆಕ್ಟ್ ಎಕ್ಸ್ಪರ್ಟ್ಸ್ ಕಮಿಟಿಯು ಲಸಿಕೆಯ ಸಾಮರ್ಥ್ಯ ಹಾಗೂ ಸುರಕ್ಷತೆ ಬಗ್ಗೆ ಮಾಹಿತಿ ನೀಡಬೇಕು ಅಂತಾ ಕೇಳಿತ್ತು. ಇದ್ರ ಬೆನ್ನಲ್ಲೇ ನಿನ್ನೆ ಎಸ್ಇಸಿ ಎರಡೂ ಲಸಿಕೆಗಳ ಮುಕ್ತ ಮಾರುಕಟ್ಟೆಗೆ ಬಿಡೋ ಬಗ್ಗೆ ಶಿಫಾರಸು ಮಾಡಿದೆ.
PublicNext
20/01/2022 07:11 am