ನವದೆಹಲಿ : ಕೋವಿಡ್ ಹೊಡೆತದಿಂದ ಇನ್ನು ಸುಧಾರಿಸಿಕೊಳ್ಳದ ಪರಿಸ್ಥಿತಿಯಲ್ಲಿ ರೂಪಾಂತರ ವೈರಸ್ ಒಮಿಕ್ರಾನ್ ಕಾಟ ಹೆಚ್ಚಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ಯೆಲ್ಲೋ ಅಲರ್ಟ್ʼ ಘೋಷಿಸಲಾಗಿದೆ.ಈ ಮೊದ್ಲು ನೈಟ್ ಕರ್ಫ್ಯೂ ಘೋಷಿಸಿದ್ದ ದೆಹಲಿ ಸರ್ಕಾರ, ಉನ್ನತ ಮಟ್ಟದ ಸಭೆಯ ನಂತ್ರ ಸಿಎಂ ಅರವಿಂದ ಕೇಜ್ರಿವಾಲ್ ಇಂದು ಯೆಲ್ಲೋ ಅಲರ್ಟ್ ಘೋಷಿಸಿದ್ದಾರೆ.
ದಾಖಲೆ ಪ್ರಮಾಣದಲ್ಲಿ ದೆಹಲಿಯಲ್ಲಿ ಕೊರೊನಾ ಮತ್ತು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರ ಬಂದಿದೆ. ಅದರಂತೆ ಭಾನುವಾರ, ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿನ 290 ಹೊಸ ಪ್ರಕರಣಗಳು ವರದಿಯಾಗಿದ್ದು, ಒರ್ವ ಸಾವನ್ನಪ್ಪಿದ್ದಾನೆ. ಆದರೆ ಪರಿವರ್ತನೆಯ ದರವು ಶೇಕಡಾ 0.55 ಆಗಿತ್ತು. ಸೋಮವಾರ 3೦೦ ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ.
PublicNext
28/12/2021 03:09 pm