ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಅವರು ನಗರದ ಹೆಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಮತ್ತಿತರರ ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಹೆಚ್.ಪಿ.ಪಿ.ಸಿ. ಕಾಲೇಜಿನ ಸುಮಾರು 1000 ವಿದ್ಯಾರ್ಥಿಗಳಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಕಾಲೇಜು ಆವರಣ ಹಾಗೂ ಒಳಾಂಗಣದಲ್ಲಿ ಓಡಾಡುತ್ತಿದ್ದವರನ್ನು ಗಮನಿಸಿದ ತಹಶೀಲ್ದಾರ್ ಕಾಲೇಜು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ. ಕರೋನಾ ನಿಯಮಗಳನ್ನು ಪಾಲಿಸದ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿರುವ ಹೆಚ್.ಪಿ.ಪಿ.ಸಿ. ಕಾಲೇಜುಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
PublicNext
24/08/2021 01:56 pm