ಗಂಗಾವತಿ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 23 ರಂದು ದೇಗುಲ ಬಂದ್ ಮಾಡಲಾಗಿತ್ತು. ಆದರೆ ಕೊರೊನ ಆತಂಕದ ನಡುವೆಯೂ ಐತಿಹಾಸಿಕ ಅಂಜನಾದ್ರಿಯ ಬೆಟ್ಟದ ಆಂಜನೇಯ ಸ್ವಾಮಿ ದರ್ಶನ ಪಡೆಯಲು ಭಕ್ತರೂ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಹಾಗಾಗಿ ದೇವಸ್ಥಾನದ ಆದಾಯಕ್ಕೆ ಯಾವುದೇ ಧಕ್ಕೆಯಾಗಿಲ್ಲ.
ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇಗುಲದ ಭಕ್ತರ ಕಾಣಿಕೆ ಹುಂಡಿ ಹಣ ಎಣಿಕೆ ತಹಸೀಲ್ದಾರ್ ಆರ್. ಕವಿತಾ ನೇತೃತ್ವದಲ್ಲಿ
ಮೇ 30ರಂದು ಹುಂಡಿಯನ್ನು ಎಣಿಕೆ ಮಾಡಿದ ಸಂದರ್ಭದಲ್ಲಿ 3.08.634 ರೂ. ಸಂಗ್ರಹವಾಗಿತ್ತು.
ಮಾ.23 ರಿಂದ ಆಗಸ್ಟ್ 04 ರವರೆಗೆ ದೇಗುಲವನ್ನು ಕೋವಿಡ್ ಕಾರಣದಿಂದ ಬಂದ್ ಆಗಿದ್ದು ಸರ್ಕಾರದ ಸೂಚನೆ ಮೇರೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಆಗಸ್ಟ್ 05 ರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಅಗಸ್ಟ್ 5 ರಿಂದ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಆಗಸ್ಟ್ 05 ರಿಂದ ಇಲ್ಲಿಯವರೆಗೂ ಸಂಗ್ರಹವಾಗಿದ್ದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು 10.24 ಲಕ್ಷ ರೂ. ಸಂಗ್ರಹವಾಗಿದೆ.
ಪ್ರತಿ ಸಲ ದೇಗುಲದ ಹುಂಡಿ ಹಣವನ್ನು ಎಣಿಕೆ ಮಾಡುವಾಗ ವಿದೇಶಿ ಕರೆನ್ಸಿಯ ನೋಟು, ನಾಣ್ಯಗಳು ಹೆಚ್ಚು ಸಿಗುತ್ತಿದ್ದವು. ಆದರೆ, ಈ ಬಾರಿ ಕೊರೊನ ಹಿನ್ನೆಲೆಯಲ್ಲಿ ವಿದೇಶಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಹುಂಡಿಯಲ್ಲಿ ಯಾವುದೇ ವಿದೇಶಿ ಕರೆನ್ಸಿಗಳು ಸಂಗ್ರಹವಾಗಿಲ್ಲ ಎನ್ನಲಾಗಿದೆ.
PublicNext
25/09/2020 03:56 pm