ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ತಯಾರಾದ ಶೀತ-ಕೆಮ್ಮಿನ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳ ಸಾವು!

ನ್ಯೂಯಾರ್ಕ್: ಶೀತದಿಂದ ಬರುವ ಕೆಮ್ಮಿನ ನಿಯಂತ್ರಣಕ್ಕೆ ಬಳಸುವ ಭಾರತದಲ್ಲಿ ತಯಾರಾದ ಔಷಧಗಳನ್ನು ಸೇವಿಸಿ ಆಫ್ರಿಕಾದ ಗಾಂಬಿಯಾ ದೇಶದಲ್ಲಿ 66ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ.

ಈ ಔಷಧಗಳ ಬಗ್ಗೆ ಎಚ್ಚರದಿಂದ ಇರುವಂತೆ ಸಂದೇಶವನ್ನು ರವಾನಿಸಿದೆ. ಈ ಮಕ್ಕಳ ಸಾವಿಗೆ ಕಿಡ್ನಿ ವೈಫಲ್ಯವೇ ಮುಖ್ಯ ಎಂದು ಗುರುತಿಸಿರುವ ಆರೋಗ್ಯ ಸಂಸ್ಥೆಯು ಈ ಔಷಧಗಳ ಬಳಕೆಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸೂಚಿಸಿದೆ.

ಹರಿಯಾಣ ಮೂಲದ ‘ಮೈಡನ್ ಫಾರ್ಮಾಸ್ಯುಟಿಕಲ್ಸ್​ ಲಿಮಿಟೆಡ್’ ತಯಾರಿಸಿರುವ ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ ಔಷಧಗಳು ಈ ಅನಾಹುತಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೊಸ್ ಅಧನೊಮ್ ಘೆಬ್ರಿಯೆಸಸ್ ಎಚ್ಚರಿಸಿದ್ದಾರೆ.

ಭಾರತದ ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಂಪರ್ಕಿಸಿದೆ. ತನಿಖೆಗೆ ಸಹಕರಿಸುವಂತೆ ಭಾರತ ಸರ್ಕಾರವನ್ನೂ ಕೋರಲಾಗಿದೆ. ಪುಟ್ಟ ಮಕ್ಕಳ ಸಾವು ಹೃದಯವನ್ನು ಕಲಕುತ್ತದೆ ಎಂದು ಅವರು ಹೇಳಿದ್ದಾರೆ. ಈ ಕೆಮ್ಮು ಸಿರಪ್‌ ಹರಿಯಾಣದ ಕಂಪನಿಯೊಂದು ತಯಾರಿಸುತ್ತದೆ.

ಗ್ಯಾಂಬಿಯಾದಲ್ಲಿ ಇದನ್ನು ಸೇವಿಸಿದ ಪರಿಣಾಮ ಭಾರೀ ಪ್ರಮಾಣದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಬುಧವಾರ ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿದ ವರದಿಯಲ್ಲಿ ಕೆಮ್ಮಿನ ಔಷಧಿ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಮನುಷ್ಯರ ಜೀವಕ್ಕೆ ವಿಷದ ಸಮಾನ ಎಂದಿದೆ.

Edited By : Abhishek Kamoji
PublicNext

PublicNext

06/10/2022 05:11 pm

Cinque Terre

49.38 K

Cinque Terre

3

ಸಂಬಂಧಿತ ಸುದ್ದಿ