ವರದಿ: ಗೀತಾಂಜಲಿ
ಮೈಸೂರು: "ಯುವರತ್ನ" ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಸಮಾಜಸೇವೆ ಮಾಡಲು ನಟ ಪ್ರಕಾಶ್ ರಾಜ್ ಮುಂದಾಗಿದ್ದಾರೆ. ಅಂದಹಾಗೆ ಪ್ರಕಾಶ್ ರಾಜ್ ಫೌಂಡೇಶನ್, ಅಪ್ಪು ಸ್ಮರಣಾರ್ಥ ಹೊಸ ಸಮಾಜ ಸೇವೆಗೆ ಸನ್ನದ್ಧವಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲೆನ್ಸ್ ನೀಡಲಾಗುತ್ತಿದೆ. ಶೀಘ್ರದಲ್ಲೇ ಮೈಸೂರಲ್ಲಿ ಬ್ಲಡ್ ಬ್ಯಾಂಕ್ ಕೂಡ ತೆರೆಯಲು ತೀರ್ಮಾನಿಸಲಾಗಿದೆ.
ಆ್ಯಂಬುಲೆನ್ಸ್ ಸಕಾಲದಲ್ಲಿ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಎಂಬ ಸ್ಥಿತಿ ಜನ ಸಾಮಾನ್ಯರಿಗೆ ಬರಬಾರದು ಎಂಬ ಉದ್ದೇಶದಿಂದ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ "ಅಪ್ಪು ಎಕ್ಸ್ಪ್ರೆಸ್" ಆ್ಯಂಬುಲೆನ್ಸ್ ಅನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಕಾಶ್ ರಾಜ್ ಫೌಂಡೇಶನ್ ನೀಡಲಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದಾರೆ.
ಶತಮಾನ ಕಂಡ ಮಿಷನ್ ಆಸ್ಪತ್ರೆಗೆ ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲೆನ್ಸ್ ನೀಡಲಾಗಿದ್ದು, ಈ ಕೆಲಸಕ್ಕೆ ಪುನೀತ್ ರಾಜ್ ಕುಮಾರ್ ಅವರ ಮಾನವೀಯತೆಯ ಕೆಲಸವೇ ಸ್ಫೂರ್ತಿಯಾಗಿದೆ ಎಂದವರು ಹೇಳಿದ್ದಾರೆ.
PublicNext
07/08/2022 04:06 pm