ಹೈದರಾಬಾದ್ : ತಮ್ಮ ಅತ್ಯದ್ಭುತ ನಟನೆಯ ಮೂಲಕ ಎಲ್ಲರ ನೆಚ್ಚಿನ ಬಹುಭಾಷಾ ನಟ ಪ್ರಕಾಶ್ ರೈ ಅವರು ಶಸ್ತ್ರ ಚಿಕಿತ್ಸೆಗೆಗಾಗಿ ಹೈದರಾಬಾದ್ ಗೆ ತೆರಳಿದ್ದಾರೆ.
ಇಂದು ಟ್ವೀಟ್ ಮೂಲಕ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿರುವ ಅವರು, ಒಂದು ಸಣ್ಣ ಫ್ರ್ಯಾಕ್ಚರ್ ಆಗಿದ್ದು, ನನ್ನ ವೈದ್ಯ ಸ್ನೇಹಿತ ಗುರುವರೆಡ್ಡಿ ಅವರ ಬಳಿ ಶಸ್ತ್ರ ಚಿಕಿತ್ಸೆ ಪಡೆಯಲು ಹೈದರಾಬಾದ್ ಗೆ ತೆರಳುತ್ತಿದ್ದೇನೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ, ನಾನು ಆರೋಗ್ಯವಾಗಿದ್ದೇನೆ. ಸದಾ ನಿಮ್ಮ ನೆನಪಿನಲ್ಲಿ ನನ್ನನ್ನು ಇಟ್ಟುಕೊಳ್ಳಿ ಎಂದಿದ್ದಾರೆ.
ಪ್ರಕಾಶ್ ರೈ ಅವರ ಟ್ವಿಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬೇಗನೆ ಗುಣಮುಖರಾಗಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಟಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಆಶೀಸಿದ್ದಾರೆ.
PublicNext
10/08/2021 04:29 pm