ನವದೆಹಲಿ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ಬೀದಿಗಿಳಿದು ನಿರಂತರ ಹೋರಾಟ ಮಾಡುತ್ತಲಿದ್ದರು ಸರ್ಕಾರ ಮಾತ್ರ ರೈತರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಡೆಡ್ಲಿ ಸೋಂಕು ಮೈ ಚಳಿಯ ರೈತರು ನಿರಂತರ ಹೋರಾಟದಲ್ಲಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಗಾಜಿಪುರ ಗಡಿಯಲ್ಲಿನ ಪ್ರತಿಭಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಬಾಲಿವುಡ್ ಹಾಗೂ ಪಂಜಾಬ್ ನಟ, ಸಂಗೀತಗಾರ ದಿಲ್ಜಿತ್ ದೋಸಾಂಜ್, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಿಲ್ಜಿತ್ ದೋಸಾಂಜ್, ಪ್ರತಿಭಟನಾಕಾರರಿಗಾಗಿ ಬೆಚ್ಚನೆಯ ಉಡುಪು ಖರೀದಿಗೆ 1 ಕೋಟಿ ರೂ. ನೆರವು ನೀಡುವುದಾಗಿ ಹೇಳಿದರು.
ಈ ವಾರದ ಆರಂಭದಲ್ಲಿ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ದಿಲ್ಜಿತ್ ದೋಸಾಂಜ್ ತಿರುಗೇಟು ನೀಡಿದ್ದರು.
ಸಿಂಗು ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ದೋಸಾಂಜ್, ಹೊಸ ಇತಿಹಾಸ ಸೃಷ್ಟಿಸಿರುವ ಎಲ್ಲಾ ರೈತರಿಗೂ ಹ್ಯಾಟ್ಸ್ ಆಫ್, ಈ ಇತಿಹಾಸವನ್ನು ಮುಂದಿನ ಪೀಳಿಗೆಗೆ ವಿವರಿಸಲಾಗುವುದು.
ರೈತರ ಸಮಸ್ಯೆಗಳನ್ನು ಯಾರೂ ಕೂಡಾ ಬೇರೆ ಕಡೆಗೆ ತಿರುಗಿಸಬಾರದು ಎಂದರು.
PublicNext
21/12/2020 04:17 pm