ಮೈಸೂರು: ನಾವು ಕೊರೊನಾ ಜೊತೆಗೇನೆ ಬದುಕಬೇಕಿದೆ. ಸರ್ಕಾರ ಇತರ ಎಲ್ಲ ಕ್ಷೇತ್ರಕ್ಕೂ ಅನುವು ಮಾಡಿಕೊಟ್ಟಿದೆ. ಆದರೆ ಚಿತ್ರಮಂದಿರಗಳ ವಿಷಯದಲ್ಲಿ 50-50 ರೂಲ್ಸ್ ಜಾರಿಯಲ್ಲಿಯೇ ಇದೆ. ಯಾಕೆ ಅನ್ನೋದು ಗೊತ್ತಿಲ್ಲ ಅಂತಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ರಾಜ್ಯ ಸರ್ಕಾರ ನಮಗೆ ಸಾಕಷ್ಟು ಸಹಾಯ ಮಾಡಿದೆ. ಇನ್ನು ಮುಂದೇನೂ ಹೆಲ್ಪ್ ಮಾಡುತ್ತದೆ ಅನ್ನೋ ಭರವಸೆ ಇದೆ. ಚಿತ್ರಮಂದಿರಗಳಿಗೂ 50-50 ರೂಲ್ಸ್ ಸಡಿಲಗೊಳಿಸಿ ಅಂತಲೇ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಮನವಿ ಮಾಡುತ್ತೇವೆ ಅಂತಲೇ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
PublicNext
30/01/2022 05:10 pm