ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತಕ್ಕೂ ಕಾಲಿಟ್ಟ ‘XE’ ಡೆಡ್ಲಿ ಸೋಂಕು : ಮುಂಬೈನಲ್ಲಿ ಮೊದಲ ಕೇಸ್ ದೃಢ

ನವದೆಹಲಿ: ಭಾರತಕ್ಕೆ ಕೊರೊನಾ ಹೊಸ ರೂಪಾಂತರಿ ‘XE’ಸೋಂಕು ಕಾಲಿಟ್ಟಿದೆ. XE ಯ ಭಾರತದ ಮೊದಲ ಪ್ರಕರಣ ಬುಧವಾರ ಮುಂಬೈನಲ್ಲಿ ವರದಿಯಾಗಿದೆ. ಹೌದು ಡೆಲ್ಟಾ, ಡೆಲ್ಟಾ ಪ್ಲಸ್, ಓಮಿಕ್ರಾನ್ ನಂತೇ ಅತಿ ವೇಗವಾಗಿ ಹರಡಬಲ್ಲ ಕೊರೊನಾ ವೈರಸ್ ಹೊಸ ರೂಪಾಂತರಿ ‘ಎಕ್ಸ್ ಇ’ ಭಾರತಕ್ಕೂ ಕಾಲಿಟ್ಟಿದೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಪ್ರಕಾರ, ಕಪ್ಪಾ ರೂಪಾಂತರದ ಒಂದು ಪ್ರಕರಣ ಇಂದು ಪತ್ತೆಯಾಗಿದೆ. ವೈರಸ್ನ ಹೊಸ ರೂಪಾಂತರಗಳನ್ನು ಹೊಂದಿರುವ ರೋಗಿಗೆ ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ 230 ಮುಂಬೈ ನಿವಾಸಿಗಳ ಪರೀಕ್ಷಾ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಕಳಿಸಲಾಗಿತ್ತು. 230 ಮುಂಬೈ ರೋಗಿಗಳಲ್ಲಿ 228 ಒಮಿಕ್ರಾನ್, ಒಂದು ಕಪ್ಪಾ ಮತ್ತು ಒಂದು XE ವೈರಸ್ ದೃಢಪಟ್ಟಿದೆ. ಒಟ್ಟು 230 ರೋಗಿಗಳಲ್ಲಿ 21 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಅವರಲ್ಲಿ ಯಾರಿಗೂ ಆಮ್ಲಜನಕ ಅಥವಾ ತೀವ್ರ ನಿಗಾ ಘಟಕದ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

06/04/2022 10:31 pm

Cinque Terre

49.38 K

Cinque Terre

7