ಯಾದಗಿರಿ: ವ್ಯಾಕ್ಸಿನ್ ಹಾಕುವ ಸಿಬ್ಬಂದಿಯ ಮಾತಿಗೆ ಜಗ್ಗದ ಯುವಕ ನನಗೆ ವ್ಯಾಕ್ಸಿನ್ ಬೇಡ ಎನ್ನುತ್ತ ಚಕ್ಕಡಿಯಿಂದ ಜಿಗಿದು ಓಡಿ ತಪ್ಪಿಸಿಕೊಂಡಿದ್ದಾನೆ. ಮುಂದೆ ಕೆಸರಿನ ಗದ್ದೆ ಇದ್ದರೂ ಲೆಕ್ಕಿಸದೇ ಚಪ್ಪಲಿ ಕೈಯಲ್ಲಿ ಹಿಡಿದು ಓಡಿದ್ದಾನೆ.
ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಹಲವೆಡೆ ವ್ಯಾಕ್ಸಿನ್ ತೆಗೆದುಕೊಳ್ಳಲು ಜನ ಸುಳ್ಳು ನೆಪ ಹೇಳುತ್ತಿದ್ದಾರೆ. ಆದಷ್ಟು ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾನು ಬೇರೆ ಟ್ಯಾಬ್ಲೇಟ್ ತಗೊಂಡಿದಿನಿ, ನಾನು ಹೊಲಕ್ಕೆ ಔಷಧಿ ಹೊಡಿಯೋಕೆ ಹೋಗಬೇಕು. ನಾಳೆ ಬಂದು ವ್ಯಾಕ್ಸಿನ್ ತಗೊತೀನಿ ಎಂದು ಅನೇಕ ಕಾರಣಗಳನ್ನು ಜನ ನೀಡುತ್ತಿದ್ದಾರೆ.
ಜಿಲ್ಲಾಮಟ್ಟದ ಅಧಿಕಾರಿಗಳೇ ಖುದ್ದಾಗಿ ಮನೆ ಮನೆಗೆ ಹೋದರೂ ಜನ ಅವರ ಮಾತಿಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ವ್ಯಾಕ್ಸಿನೇಶನ್ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಜನರ ಮನವೊಲಿಸುವ ಕಾರ್ಯವೇ ದೊಡ್ಡ ಸವಾಲಾಗಿದೆ.
PublicNext
05/10/2021 05:05 pm