ಜಿನೇವಾ: ಕೊರೊನಾಗೆ ರೆಮ್‌ಡೆಸಿವಿರ್ ಪರಿಣಾಮಕಾರಿ ಎಂದು ಹೇಳಲು ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ಅಭಿಪ್ರಾಯಪಟ್ಟಿದೆ.
ಕೋವಿಡ್ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಗಿಲ್ಯಾಡ್ಸ್‌ನ ರೆಮ್‌ಡೆಸಿವಿರ್ ಔಷಧಿ ನೀಡಲು ಶಿಫಾರಸು ಮಾಡುವುದಿಲ್ಲ. ಇದನ್ನು ನೀಡಿದರೆ ಸೋಂಕಿತರು ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ ಹಾಗೂ ವೆಂಟಿಲೇಟರ್ ಅಗತ್ಯವನ್ನು ಅದು ಕಡಿಮೆ ಮಾಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಡಬ್ಲ್ಯುಎಚ್‌ಒ ತಂಡ ತಿಳಿಸಿದೆ.
ಕೋವಿಡ್ ಚಿಕಿತ್ಸೆಯಲ್ಲಿ ಬಳಸಲು ವಿಶ್ವದಾದ್ಯಂತ ಅನುಮೋದನೆ ಪಡೆದಿರುವ ಎರಡು ಔಷಧಿಗಳಲ್ಲಿ ರೆಮ್‌ಡೆಸಿವಿರ್ ಒಂದಾಗಿತ್ತು. ಆದರೆ ಡಬ್ಲ್ಯುಎಚ್‌ಒ ಕಳೆದ ತಿಂಗಳು ನಡೆಸಿದ ದೊಡ್ಡ ಪ್ರಮಾಣದ ಪ್ರಯೋಗದಲ್ಲಿ, ರೆಮ್‌ಡೆಸಿವಿರ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸಾಬೀತಾಗಿದೆ.
PublicNext
20/11/2020 11:54 am