ನವದೆಹಲಿ: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾಗೆ ಸಂಭಾವ್ಯ ಲಸಿಕೆ ಸಿಗುವ ದಿನಗಳು ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಈ ಲಸಿಕೆ ಲಭ್ಯವಾದ ನಂತರ ಜನರಿಗೆ ಶುಲ್ಕ ವಿಧಿಸಬಾರದು ಎಂದು ಲಸಿಕೆ ತಯಾರಕ ಕಂಪನಿಗಳಿಗೆ ಮನವಿ ಮಾಡಿದ್ದಾರೆ.
ಎಕನಾಮಿಕ್ಸ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೂರ್ತಿ "ಕೋವಿಡ್ -19 ಲಸಿಕೆ ಸಾರ್ವಜನಿಕ ಹಿತದೃಷ್ಟಿಯಿಂದ ಇರಬೇಕು ಮತ್ತು ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗಬೇಕು ಎಂದು ನಾನು ನಂಬುತ್ತೇನೆ.
ಈ ಲಸಿಕೆಗಳು ಪ್ರಪಂಚದ ಸಂಪೂರ್ಣ ಜನಸಂಖ್ಯೆಗೆ ಮುಕ್ತವಾಗಿರಬೇಕು.
ಲಸಿಕೆ ಉತ್ಪಾದಿಸುವ ಎಲ್ಲಾ ಕಂಪನಿಗಳಿಗೆ ಪರಿಹಾರವನ್ನು ನೀಡಬೇಕು ಯುಎನ್ ಅಥವಾ ವೈಯಕ್ತಿಕ ದೇಶಗಳು ತಮ್ಮ ವೆಚ್ಚಕ್ಕಾಗಿ ಕಾಣಬೇಕು ಮತ್ತು ದೊಡ್ಡ ಲಾಭಕ್ಕಾಗಿ ಅಲ್ಲ " ಎಂದು ಹೇಳಿದ್ದಾರೆ.
PublicNext
18/11/2020 11:18 pm