ಬೆಂಗಳೂರು: ಡೆಡ್ಲಿ ಸೋಂಕು ಕೊರೊನಾ ಹರಡದಂತೆ ತಡೆಯಲು ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ.
ಇನ್ಮೂಂದೆ ಕಾರಿನಲ್ಲಿ ಅಥವಾ ಬೈಕ್ನಲ್ಲಿ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದೆ ಸಂಚರಿಸುವಂತಿಲ್ಲ.
ಒಬ್ಬರೇ ಇದ್ದರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲೇಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ತಿನ್ನುವಾಗ, ಕುಡಿಯುವಾಗ, ಈಜುವಾಗ ಮಾತ್ರ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಒಬ್ಬರಿಗಿಂತ ಹೆಚ್ಚು ಜನ ನಿಂತು ಮಾತನಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ.
ಕೊರೊನಾ ನಿಯಂತ್ರಣಕ್ಕಾಗಿ ಮಾಸ್ಕ್ ಧಾರಣೆ ಬಗ್ಗೆ ಜಾಗೃತಿ ಮೂಡಿಸಲು ವಾರ್ಡ್ ವಾರು, ವಲಯವಾರು ಸಮಿತಿ ರಚಿಸಲು ಆದೇಶಿಸಲಾಗಿದೆ.
PublicNext
28/10/2020 07:49 am