ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆಡ್ಲಿ ಸೋಂಕಿಗೆ ಬಲಿಯಾದ ಪೊಲೀಸರಿಗೆ 30 ಲಕ್ಷ ಪರಿಹಾರ : ಸಿಎಂ ಬಿಎಸ್ ವೈ

ಬೆಂಗಳೂರು: ಕೊರೊನಾ ವಾರಿಯರ್ಸ್ ಗಳಾಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ

ಈಗಾಗಲೇ ಮಹಾಮಾರಿ ಕೊರೊನಾ ಸೋಂಕಿನಿಂದಾಗಿ 85 ಜನ ಅಧಿಕಾರಿ-ಸಿಬ್ಬಂದಿ ಮೃತಪಟ್ಟಿದ್ದಾರೆ.

ಅವರ ಕುಟುಂಬ ಸದಸ್ಯರಿಗೆ 30 ಲಕ್ಷ ಪರಿಹಾರ ದೊರೆಯಲಿದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ನಗರ ಸಶಸ್ತ್ರ ಮೀಸಲು ಪಡೆ ಮೀಸಲು ಪಡೆಯ ಉದ್ಯಾನದಲ್ಲಿ ಬುಧವಾರ ಹುತಾತ್ಮ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿ ಮಾತನಾಡಿದ ಅವರು, 'ಪೊಲೀಸರು ಲಾಕ್ ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ.

ಬೆಂಗಳೂರಿನಲ್ಲಿ 345 ಸೇರಿ ರಾಜ್ಯದಾದ್ಯಂತ 580 ಚೆಕ್ ಪೋಸ್ಟ್ ನಿರ್ಮಿಸಿ ಕೊರೊನಾ ನಿಯಂತ್ರಿಸಿದ್ದಾರೆ' ಎಂದರು.

'ರಾಜ್ಯದಲ್ಲಿ 8,900 ಪೊಲೀಸರು ಸೋಂಕಿತರಾಗಿದ್ದಾರೆ. ಇವರ ಕುಟುಂಬದ 500 ಮಂದಿ ಸದಸ್ಯರಿಗೂ ಸೋಂಕು ತಗುಲಿದೆ' ಎಂದರು.

ರಾಜ್ಯದ 17 ಮಂದಿ ಸೇರಿ ದೇಶದಾದ್ಯಂತ 264 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಹುತಾತ್ಮರಾದ ಎಲ್ಲ ಅಧಿಕಾರಿ-ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸಲಾಯಿತು.

Edited By : Nirmala Aralikatti
PublicNext

PublicNext

22/10/2020 10:40 am

Cinque Terre

43.45 K

Cinque Terre

2