ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಈ ಮಧ್ಯೆ ಮಾಸ್ಕ್‌ನಿಂದಲೂ ಕೊರೊನಾ ಹರಡುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ಆಸ್ಟ್ರೇಲಿಯಾ ತಜ್ಞರು ನಡೆಸಿರುವ ಈ ಅಧ್ಯಯನ ಶಾಕಿಂಗ್ ವಿಚಾರವನ್ನು ತಿಳಿಸಿದೆ. ಮಾಸ್ಕ್ ಸ್ವಚ್ಛವಾಗಿರದಿದ್ದರೆ ಕೊರೊನಾ ಸೋಂಕು ಹರಡಬಹುದು. ಹೀಗಾಗಿ ಅನಿಯಮಿತವಾಗಿ ಮಾಸ್ಕ್ ಶುಚಿಗೊಳಿಸಬೇಕು. ವಾಶ್ ಮಾಡದ ಮಾಸ್ಕ್ ಸೋಂಕು ತಡೆಯುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ ಎಂದು ಅಧ್ಯಯನದಲ್ಲಿ ಸ್ಪಷ್ಟಪಡಿಸಲಾಗಿದೆ.
ನೀವು ಬಳಸುವ ಬಟ್ಟೆ ಮಾಸ್ಕ್ ಅನ್ನು ಪ್ರತಿನಿತ್ಯವೂ 60 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿನೀರಿನಲ್ಲಿ ನೆನೆಸಿ, ಸೋಪ್ ಪೌಡರ್ ಹಾಕಿ ತೊಳೆಯಬೇಕು. ಸರ್ಜಿಕಲ್ ಮಾಸ್ಕ್ ಆದರೆ ಒಮ್ಮೆ ಬಳಕೆ ಮಾಡಿದ ನಂತರ ಮರುಬಳಕೆ ಮಾಡದೆ ಬಿಸಾಡಬೇಕು ಎಂದು ಸಲಹೆ ನೀಡಲಾಗಿದೆ.
PublicNext
13/10/2020 11:23 am