ಹಾವೇರಿ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಕೆಲವೊಮ್ಮೆ ರಭಸವಾಗಿ ಕೆಲವೊಮ್ಮೆ ಜಿಟಿಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಗೆ ಹಾವೇರಿ ತಾಲೂಕಿನ ಬರಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಯುವತಿಯ ಮೈಮೇಲೆ ಬಿದ್ದಿದೆ.
18 ವರ್ಷದ ಹೊನ್ನವ್ವ ತಳವಾರ ಎಂಬ ಯುವತಿ ಗಾಯಗೊಂಡಿದ್ದಾಳೆ. ಗೋಡೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ಹಾವೇರಿ ತಹಶೀಲ್ದಾರ ಶಂಕರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ಮಳೆಯಿಂದ ಹಾಳಾಗಿರುವ ಮನೆ ಬಿಟ್ಟು ಬೇರೆ ಕಡೆ ವಾಸಿಸುವಂತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
Kshetra Samachara
21/07/2024 03:46 pm