ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಆರ್.ಎಸ್.ಎಸ್ ಪ್ರಮುಖರ ಮೇಲೆ ಹಲ್ಲೆ ನಡೆದಿದೆ.
ಹೌದು.. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಅನ್ಯಧರ್ಮಿಯರಿಂದ ಆರ್.ಎಸ್.ಎಸ್ ಪ್ರಮುಖರ ಮೇಲೆ ಹಲ್ಲೆ ನಡೆದಿದೆ. ಅಕ್ಟೋಬರ್ 14ರಂದು ರಟ್ಟಿಹಳ್ಳಿ ಪಟ್ಟಣದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಥಸಂಚಲನದ ರೂಟ್ ಮ್ಯಾಪ್ ನೋಡಲು ತೆರಳಿದ್ದ ಪ್ರಮುಖರ ಮೇಲೆ ಹಲ್ಲೆ ನಡೆದಿದೆ.
ಇನ್ನು ರೂಟ್ ಮ್ಯಾಪ್ ಪರಿಶೀಲನೆ ವೇಳೆ ಗಲಾಟೆ ನಡೆದಿದ್ದು, ರಟ್ಟಿಹಳ್ಳಿಯ ಹಳೇ ಬಸ್ ನಿಲ್ದಾಣದ ಎದುರು ಹಲ್ಲೆ ಮಾಡಲಾಗಿದೆ. ಅಕ್ಟೋಬರ್ 7ರಿಂದ ಪಟ್ಟಣದಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್ ಶಿಬಿರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಈಗ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಆರ್‌ಎಸ್‌ಎಸ್ ಪ್ರಮುಖ ಗುರಣ್ಣ ಕುಲಕರ್ಣಿ, ಚಂದ್ರಣ್ಣ, ಮಾಲತೇಶ ಮತ್ತು ಸುನೀಲ್ ಮೇಲೆ ಹಲ್ಲೆ ನಡೆದಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
12/10/2022 02:41 pm