ಹಾವೇರಿ : ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಅಪಘಾತ ಪ್ರಕರಣದಲ್ಲಿ ಹಾವೇರಿ ಜಿಲ್ಲೆ ಸವಣೂರಿನ 10 ಮೃತರದು ಒಂದೊಂದು ಕಥೆ. ಒಬ್ಬರ ಪತ್ನಿ ಗರ್ಭಿಣಿಯಾಗಿದ್ದರೆ ಮತ್ತೊಬ್ಬರು ಮದುವೆಯಾಗಿ ನಾಲ್ಕು ತಿಂಗಳಾಗಿದೆ. ಮತ್ತೊಬ್ಬನ ಕುಟುಂಬದಲ್ಲಿ ಚಿಕ್ಕ ಚಿಕ್ಕ ಮಕ್ಕಳಿವೆ.
ಮತ್ತೊಂದು ಕಡೆ ಒಂದೆ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ.ಸವಣೂರು ಪಟ್ಟಣ ಹಿಂದೆ ಎಂದೂ ಕಾಣದಂತ ಆಘಾತ ಎದುರಿಸಿದೆ. ಸವಣೂರು ಪಟ್ಟಣದಲ್ಲಿ ನಿರವಮೌನ ಆವರಿಸಿದ್ದು ಮೃತರ
ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೃತರ ಮನೆ ಮುಂದೆ ಜನದಟ್ಟಣೆ ಮನೆಯೊಳಗೆ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂತವರ ಮನ ಕಲುಕುವಂತಿದೆ. ಜೀವನೋಪಾಯಕ್ಕೆ ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡಿದ್ದ 10 ಜನರು ಸಾವನ್ನಪ್ಪಿದ್ದು ಮೃತರ ಕುಟುಂಬಗಳ ಆಧಾರ ಸ್ತಂಭಗಳೇ ಕಳಚಿ ಬಿದ್ದಂತಾಗಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು ನೆರವಿಗೆ ಬರುವಂತೆ ಈ ಬಡ ಕುಟುಂಬಗಳು ಮನವಿ ಮಾಡಿಕೊಂಡಿವೆ. ಈ ಮಧ್ಯ ಒಂದೇ ಕಡೆ 10 ಜನರಿಗೂ ಜನಾದಿಕಿ ನಮಾಜ್ ಮಾಡಲು ಜಮಾತ್ ನಿರ್ಧರಿಸಿದ್ದು ಈ ಕುರಿತಂತೆ ಚರ್ಚಿಸಲಾಗಿದೆ.
PublicNext
22/01/2025 03:45 pm